Monday, February 02, 2015

ಶಿವಪ್ಪ ಮೊಹೆಂಜೋದಾರೋ

ಟೀಚರ್: ಹರಪ್ಪ ಮೊಹೆಂಜೋದಾರೋ ಸಂಸ್ಕೃತಿಗೆ ಇರುವ ಮತ್ತೊಂದು ಹೆಸರು ಏನು?

ದ್ಯಾಮ್ಯಾ: ಶಿವಪ್ಪ ಮೊಹೆಂಜೋದಾರೋ ಸಂಸ್ಕೃತಿ!

ಕೇಳಿದ ಟೀಚರ್ ಫುಲ್ ಥಂಡಾ!

ಟೀಚರ್: ಏನಲೇ ಹಾಂಗದ್ರ?

ದ್ಯಾಮ್ಯಾ: ಹರಪ್ಪ ಅಂದ್ರ ಹರ + ಅಪ್ಪ ಹಾಂಗಾಗಿ  ಶಿವ + ಅಪ್ಪ. ಅದಕss ಶಿವಪ್ಪ. ಅದಕss ಶಿವಪ್ಪ ಮೊಹೆಂಜೋದಾರೋ. ಇದ್ರಾಗ ತಪ್ಪೇನೈತ್ರೀ???

ಟೀಚರ್: ನಿನ್ನ ತಲಿ.

ದ್ಯಾಮ್ಯಾ: ಶಿವಪ್ಪ ಮೊಹೆಂಜೋದಾರೋ ಬ್ಯಾಡ ಅಂದ್ರ ವಿರೂಪಾಕ್ಷಪ್ಪ ಮೊಹೆಂಜೋದಾರೋ, ಷಡಕ್ಷರಪ್ಪ ಮೊಹೆಂಜೋದಾರೋ, ಪಂಚಾಕ್ಷರಪ್ಪ ಮೊಹೆಂಜೋದಾರೋ, ನೀಲಕಂಠಪ್ಪ ಮೊಹೆಂಜೋದಾರೋ, ಗಜಚರ್ಮಾಂಬರಪ್ಪ ಮೊಹೆಂಜೋದಾರೋ.............................ಇದರಾಗ ಯಾವದಾರ ನಡಿತೈತೆನ್ರೀ????ಹಾಂ?

ಹರಪ್ಪ ಮೊಹೆಂಜೋದಾರೋ ಸಂಸ್ಕೃತಿಗೆ ಸಿಂಧೂ ಕಣಿವೆ ಸಂಸ್ಕೃತಿ ಅಂತ ಇನ್ನೊಂದು ಹೆಸರು ಹೇಳಬಹುದು ಅಂತ hoping against the hope ಆಶಿಸಿದ್ದ ಹಿಸ್ಟರಿ ಮೇಡಂ, 'ಶಿವನೇ ಭಯಹರನೇ.........' ಅಂತ ಭಜನಿ ಮಾಡಿಕೋತ್ತ, ತಾಳಾ ತಟ್ಟಿಕೋತ್ತ ಉಳಿಬಸಪ್ಪನ ಗುಡಿ ಕಡೆ ಹೋದವರು ಆಕಡೆನೇ ನಾಪತ್ತೆ ಅಂತ ಸುದ್ದಿ.

No comments: